16ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ
ಶ್ರೀ ಕ್ಷೇತ್ರ ಬಲಿಪ ತೋಟ
ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನ, ಭಾರತಿನಗರ, ಬಿಜೈ, ಮಂಗಳೂರು.
ಶ್ರೀ ಕ್ಷೇತ್ರದಲ್ಲಿ 06 ಸೆಪ್ಟೆಂಬರ್ 2026ರಂದು ಕಂಬೆರ್ಲು ದೈವದ ಹೂವಿನ ಪೂಜೆ ಮತ್ತು ದರ್ಶನ ಸೇವೆ ನಡೆಯಿತು. ಈ ಸಂದರ್ಭದಲ್ಲಿ 16ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ ಹಾಗೂ ಕನ್ನಡ ಚಲನಚಿತ್ರ ಪ್ರೀತಿಯೇ ಉಸಿರು ಇದರ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಬಿಡುಗಡೆ ಕಾರ್ಯಕ್ರಮವನ್ನು ಮಂಜಿತ್ ಶೆಟ್ಟಿ ತಾಳಿಪಾಡಿಗುತ್ತು ಮನೆ ಇವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಚಲನಚಿತ್ರದ ನಿರ್ದೇಶಕರು ರವಿಕುಮಾರ್, ಧ್ಯಾನಚಂದ್ರ, ಶ್ರೀಮತಿ ಜಾನಕಿ ಡಿ. ಶೆಟ್ಟಿ ತಲಿಪಾಡಿ, ಜಗನ್ನಾಥ ಶೆಟ್ಟಿ ತಲಿಪಾಡಿ, ಶಾತೀಶ್ ಶೆಟ್ಟಿ ಸಿ.ಎ., ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಪ್ರೊಫೆಸರ್ ಹಾಗೂ HOD ಅನುಷ್ ಬೇಕಾಲ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ಪ್ರೊಫೆಸರ್ ಶ್ರೀನಿವಾಸ್, ಸಹ್ಯಾದ್ರಿ ಕಾಲೇಜಿನ ಪ್ರೊಫೆಸರ್ ಅಜಿತ್ ಕುಮಾರ್, ಸಹ್ಯಾದ್ರಿ ಗುರಿಕಾರರು ಉಮಾನಾಥ್ ಹಾಗೂ ಕೇಶವ ಕೋಡಿಕಲ್, ಗಂಗಾಧರ್ ಮಾಸ್ಟರ್, ಕಲ್ಪವೇದಿಕೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.
ಕಿರಣ್ ಕುಮಾರ್ ಕೋಡಿಯಲ್ ಬೈಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. 1ನೇ ತರಗತಿಯಿಂದ ಡಿಗ್ರಿವರೆಗಿನ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಒಟ್ಟು 70 ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.